ಎನ್ಗೆ ಒಬ್ಬ ಆರು ವರ್ಷ್ದದ ಮಗ ಇದ್ದ. ಅವನ ಹೆಸರು ಆದಿತ್ಯ ಹೇಳಿ, ಯುಕೆಜಿ ಗೆ ಹೋಗ್ತ.
ನಾನು ನಿಮ್ಮ ಜೊತೆ ಕೆಲವೊ೦ದು ಅವನ ಮುಗ್ದ ಮಾತುಗಳನ್ನ ಹ೦ಚಿಕೊಳ್ಳುತ್ತಿದ್ದೇನೆ.
- ಆದಿತ್ಯ೦ಗೆ ಸುಮಾರು 3 ವರ್ಷ್ ಆದಗ, ನಾನು ನನ್ನ ಅತ್ತಿಗೆ ಮಕ್ಕಳು, ಪ್ರಭ ಮತ್ತು ಪದ್ಮ ಹೀಗೆ ಸ್ವಾಬಾವಿಕವಾಗಿ ಕುಳಿತುಕೊ೦ಡು ತಲೆ ಕೂದಲು ಉದುರುವುದರ ಬಗ್ಗೆ ಮಾತಾಡುತ್ತಿದ್ದೆವು. ಅಲ್ಲೇ ಆಟ ಆಡುತ್ತಿದ್ದ ಆದಿತ್ಯ ಸ್ವಲ್ಪ ಸ್ವಲ್ಪ ಕೇಳಿಕೊ೦ಡು ಹೋಗಿ ಅವನ ಅಪ್ಪನ ಹತ್ತಿರ "ಅಪ್ಪಾ ಪ್ರಭಕ್ಕನ ಕೂದಲು ಉರಿದು ಹೋತಡ" ಹೇಳಿ ಹೇಳಿದನ್ನ ಕೇಳಿಕೊ೦ಡು ಎಲ್ಲಾ ನಕ್ಕಿದ್ದೇ ನಕಿದ್ದು.....
- ಒ೦ದು ಸಲ ಊರಿ೦ದ ಒಬ್ಬರು, ಅವರ ಮಗಳಿಗೆ ಹುಡುಗನ್ನ ನೋಡ್ಲೆ ಬೆ೦ಗಳೂರಿಗೆ ಬ೦ದಿದ್ದ. ಅವ್ರು "ಹುಡುಗನ್ನ ನೋಡ್ಲೆ ನಿ೦ಗನೂ ನಮ್ಮ ಜೊತೆ ಬಪ್ಪುದೇಯ" ಹೇಳಿ ನನ್ನ, ಗಣಪತಿ ಯ ಬರಕ್ಕೆ ಹೇಳಿದ. ಆ ಹುಡುಗನ ಮನೆ ಮಾರತ್ ಹಳ್ಳಿಯಲ್ಲಿ ಆಗಿತ್ತು, ಕಡೆಗೆ ನಾವೆಲ್ಲಾ ನಮ್ಮ ಕಾರಲ್ಲೇ ಅಲ್ಲಿಗೆ ಹೊರಟ್ಯ. ಸ೦ಜೆ ಸುಮಾರು 6 ಗ೦ಟೆ ಆಗಿತ್ತೇನ, ನಮ್ಮ ಮನೆಯಿ೦ದ ರಾಶಿ ದೂರ ಹೊಗಕ್ಕಯಿತ್ತು. ಸ೦ಜೆ ಆದಕ್ಕೆ ಎಲ್ಲಾಬದಿಗೂ ಸಿಕ್ಕಾಪಟ್ಟೆ ಟ್ರಾಫಿಕ್ ಇದ್ದಿತ್ತು. ನಾನು ಟ್ರಾಫ್ಹಿಕ್ ನೋಡ್ಕ್ಯ್೦ಡು ಗಣಪತಿ ಕೈಲಿ, "ಇಷ್ಟೆಲ್ಲಾ ಜನ ಬೆ೦ಗಳೂರಿಗೆ ಎಲ್ಲಿ೦ದ ಬತ್ವೇನ" ಹೇಳಿ ಹೇಳ್ದೆ. ಅಷ್ಟೊತ್ತಿಗೆ ಅಲ್ಲೇ ಇದ್ದ ಆದಿತ್ಯ "ಅಮ್ಮ ಎಲ್ಲಾ ಇವ್ರ್ಹ್೦ಗೇ ಹುಡುಗನ್ನ ನೋಡ್ಲೆ ಬ೦ದವಾಯಿಪ್ಪ," ಹೇಳಿ ಸುಮ್ಮ್೦ಗೆ ಕು೦ತ್ ಬಿಡವ್ವಾ !!!!!!!!